Monday 7 June, 2010

ಅವತ್ತೊಂದಿನಾ....


ಅವತ್ತೊಂದಿನಾ ಸಂಜೆ ನಾನು ಆಟ ಆಡಿ ವಾಪಸ್ ಮನಿಗೆ ಬಂದಾಗ ಅಜ್ಜ ಸಿಕ್ಕಾಪಟ್ಟೆ ಸಿಟ್ಟನಲ್ಲಿದ್ದಾ, "ಯಾರ ಕಳ್ಳನನ ಮಕ್ಕಳು ಹೊಲದಗ ಮಾವಿನಕಾಯಿ ಗಿಡಾನ ಬೊಳ ಮಾಡ್ಯಾರ್, ಓಂದು ಮಾವಿನಕಾಯಿ ಬಿಟ್ಟಿಲ್ಲಾ, ಏಲ್ಲಾ ಹರಕೊಂಡ ಹೊಗ್ಯಾರ್...ಕಳ್ಳ್ ...ಮಕ್ಕಳು" ಅಂತಾ
ಕಟ್ಟೆಮ್ಯಾಲೆ ಕೂತಗೊಂಡ ಬಯ್ಯಾಕತ್ತಿದ್ದಾ. ನಮ್ಮಜ್ಜಿ "ದಿನಾಲು ಒಂದರ ರಗಳಿ ಇರುದಾ ನಿಮ್ದು....ಗಿಡಾನ ಬ್ಯಾರೆದವರಿಗೆ ಕೊಟ್ಟಿದ್ರ ರೊಕ್ಕರ ಬರತಿತ್ತಿಲ್ಲಾ...ಇಗ ಅದು ಇಲ್ಲಾ...." ಅಂತ ಅಜ್ಜನ್ನಾ ವಾಪಸ್ ದಬಾಯಿಸಿದ್ಲು. "ನಾನ ಒಬ್ಬವ ಏಸ್ಟರ ಮಾಡ್ಲಿ...ಹೊಲದಾಗಿರು ಆಳು ಬರೆ ತಿನ್ನುದು...ಹೊಗಿ ಬೆವಿನ ಗಿಡದ ಬುಡಕ ಮಕ್ಕೊಳುದು...ಹಿಂಗಾದ್ರ ಹೊಲಾ ಕಾಯುದು ಯಾರು?".

ಅವ್ವ ಬಿಸಿ ರೊಟ್ಟಿ ಮಾಡಾಕ ಸ್ಟಾರ್ಟ್ ಮಾಡಿದ್ಲು, ನಂಗು ಆಟ ಆಡಿ ಹೊಟ್ಟಿ ಹಸದಿತ್ತು...೪-೫ ರೊಟ್ಟಿ ತಿಂದ, ಅಜ್ಜನ ಕಡೆ ಹೊಗಿ ಸ್ವಲ್ಪ ಹರಿಕತೆ ಕಳಿದೆ...ಸ್ವಲ್ಪ ಹೊತ್ತಾದ ಮ್ಯಾಲೆ ಅಜ್ಜ ಸುಮ್ನ ಕಟ್ಟಿಮ್ಯಾಲೆ ಮಲಕ್ಕೊಂಡ್ ಬಿಟ್ರು. ಸ್ವಲ್ಪ ಹೊತ್ತಿಗೆ ಅಡಗಿ ಮನಿಯಿಂದಾ ವಗ್ಗರಣಿ ವಾಸನಿ ಬರಾಕ ಸೂರು ಆಯ್ತು, ಏನಪ ಇದು ಅಂತಾ ಓಡಿ ಹೊಗಿ ನೊಡಿದ್ರ, ಅಜ್ಜಿ ಉಪ್ಪಿನಕಾಯಿ ಹಾಕಕ ವಗ್ಗರಣಿ ಹಾಕಾಕತಿದ್ರು. ಅಲ್ಲೆ ಪಕ್ಕದಾಗ ಕನಿಸ್ಟ ಅಂದ್ರು ೩೫೦ ಮಾವಿನಕಾಯಿ ಕೊಯ್ದು ಹೊಳ್ ಮಾಡಿರು ಪಾತ್ರಿ ಇತ್ತು. ಅಜ್ಜಿ "ಮಾವಿನ ಕಾಯಿ ಚಲೊ ಅದಾವ ನೊಡ...೨ ವರ್ಷಕ್ಕ ಸಾಕಾಗತ್ತ...ಉಪ್ಪಿನಕಾಯಿ ಚಲೊ ಅಕ್ಕ್ಯೈತಿ...." ಅಂದು. ಆಲ್ಲೆ ಪಕ್ಕದಲ್ಲೆ ಅವ್ವ ಕೂತಿದ್ರು, ಸ್ವಲ್ಪ ಅನುಮಾನದಿಂದಾ "ಏಲ್ಲಿ ಹರಕೊಂಡ ಬಂದಿರಿ...?", ಅಂತ ಕೆಳಿದ್ದಾತಡ ನಾನು ಮಾತ್ರ ಅಲ್ಲಿ ಇರಲಿಲ್ಲಾ......ಇಡಿ ರಾತ್ರಿ ವಾಪಸ ಮನಿಗೆ ಬಂದಿಲ್ಲಾ.

ಆಗಿದ್ದಾದ್ರು ಏನಪಾ....ಇಷ್ಟಾ... ಅವತ್ತು ಬೆಳಿಗ್ಗೆ ಗೆಳೆಯ ರಾಚೊಟಿ ಮತ್ತೆ ನಾನು, ಬಾವಿ ನ್ಯಾಗ ಇಜಾಡುನು ಅಂತ ಹೊಲಕ್ಕ ಹೊಗಿದ್ವಿ. ಅಜ್ಜ ನಮ್ಮನ್ನ ನೊಡಿ "ಲೇ...ಉಡಾಳ ನನ್ ಮಕ್ಳ...ಬಾವ್ಯಾಗ ಕಲ್ಲ ಜಾರ್ ತಾವು...ಇನ್ನಾ ಚಲ್ಲೊತಂಗ ಇಜಾಡಾಕ ಬರುದಿಲ್ಲಾ...ಹೊಕ್ಕಿರನ ಮನಿಗೆ....", ಅಂತ ಜೊರಗ ಬೈದು ಮನಿಗೆ ವಾಪಸ ಕಳಿಸಿದ್ರು. ನನ್ಗು ಜಾಸ್ತಿ ಸಿಟ್ಟ ಬಂದಿತ್ತು, ಅವರು ಓಳ್ಳೆದಕ್ಕ ಹೆಳ್ತಾರ ಅನ್ನೊ ಮಾತು ಅರ್ಥ ಮಾಡಕೊಳ್ಳು ವಯಸ್ಸು ಆಗಿರಲಿಲ್ಲಾ ನಮಗ... "ನಿಮ್ಮ ಹೊಲದಾಗ ನಿಂಗಾ ಇಜಾಡಾಕ ಬಿಡುದಿಲ್ಲಲಲೆ" ಅಂತಾ ರಾಚೋಟೆ ಬೆರೆ ಅಂಗಿಸಿದ್ದಾ. ಅವತ್ತ ಮದ್ಯಾನ ವಾಪಸ ಹೊಲಕ್ಕ ರಾಚೊಟಿ ಮತ್ತೆ ನಾನು ಹೊಗಿ...ಅಜ್ಜ ಉಟ ಮಾಡು ಹೊತ್ತನ್ಯಾಗ ಕೆಳಗಿನ ಹೊಲದ ಕಡೆ ಹೊಗು ವಿಷಯ ನನಗ ಮೊದಲ ಗೊತ್ತಿತ್ತು. ಸಮಯ ನೊಡಿ...ಮಾವಿನ ಕಾಯಿ ಗಿಡಾ ಬೊಳ ಮಾಡಿ...ಅವ ಮಾವಿನ ಕಾಯಿನ ಇಬ್ಬರು ಹಂಚ ಕೊಂಡ..ಮನಿಗೆ ವಾಪಸ ಆಗಿ "ತಗೋಬೆ ಅವ್ವ...ಚಿಕನಾಳ (ಪಕ್ಕದಲ್ಲೆ ಇರುವ ಒಂದು ಹಳ್ಳಿ) ಕ್ಕ ಕ್ರಿಕೆಟ್ ಆಡಾಕ ಹೊಗಿದ್ಯಾ..ಅಲ್ಲೆ ರಸ್ತೆ ಮ್ಯಾಲೆ ಇರು ಹೊಲದಾಗ ಮಾವಿನ ಕಾಯಿ ಇದ್ವು...ಹೊಲಾ ಕಾಲಿ ಬಿದ್ದಿತ್ತು...ಕಿತಗೊಂಡ ಬಂದಿನಿ..." ಅಂತ ಹೆಳಿ, ಸಾಯಂಕಾಲದ ವರೆಗೆ ಕ್ರಿಕೆಟ್ ಆಡಾಕ ಹೊಗಿದ್ಡೆ. ವಾಪಸ ಸಂಜೆ ಬಂದಾಗ ಅಜ್ಜನ ಕಥೆ ಕೆಳಿದ್ದು....

"ಬೆಲಿ ಏದ್ದು ಹೋಲಾ ಮೆಯ್ಡಂತೆ" ಅನ್ನೊ ಗಾದೆ ಇದೆಯಲ್ಲಾ...ಅದರ ಅರ್ಥ ಗೊತ್ತಿಲ್ಲಾ ಅಂದ್ರ, ಅದಕ್ಕ ಒಂದು ಉದಾಹರಣೆ ಇದು