Monday 7 June, 2010

ಅವತ್ತೊಂದಿನಾ....


ಅವತ್ತೊಂದಿನಾ ಸಂಜೆ ನಾನು ಆಟ ಆಡಿ ವಾಪಸ್ ಮನಿಗೆ ಬಂದಾಗ ಅಜ್ಜ ಸಿಕ್ಕಾಪಟ್ಟೆ ಸಿಟ್ಟನಲ್ಲಿದ್ದಾ, "ಯಾರ ಕಳ್ಳನನ ಮಕ್ಕಳು ಹೊಲದಗ ಮಾವಿನಕಾಯಿ ಗಿಡಾನ ಬೊಳ ಮಾಡ್ಯಾರ್, ಓಂದು ಮಾವಿನಕಾಯಿ ಬಿಟ್ಟಿಲ್ಲಾ, ಏಲ್ಲಾ ಹರಕೊಂಡ ಹೊಗ್ಯಾರ್...ಕಳ್ಳ್ ...ಮಕ್ಕಳು" ಅಂತಾ
ಕಟ್ಟೆಮ್ಯಾಲೆ ಕೂತಗೊಂಡ ಬಯ್ಯಾಕತ್ತಿದ್ದಾ. ನಮ್ಮಜ್ಜಿ "ದಿನಾಲು ಒಂದರ ರಗಳಿ ಇರುದಾ ನಿಮ್ದು....ಗಿಡಾನ ಬ್ಯಾರೆದವರಿಗೆ ಕೊಟ್ಟಿದ್ರ ರೊಕ್ಕರ ಬರತಿತ್ತಿಲ್ಲಾ...ಇಗ ಅದು ಇಲ್ಲಾ...." ಅಂತ ಅಜ್ಜನ್ನಾ ವಾಪಸ್ ದಬಾಯಿಸಿದ್ಲು. "ನಾನ ಒಬ್ಬವ ಏಸ್ಟರ ಮಾಡ್ಲಿ...ಹೊಲದಾಗಿರು ಆಳು ಬರೆ ತಿನ್ನುದು...ಹೊಗಿ ಬೆವಿನ ಗಿಡದ ಬುಡಕ ಮಕ್ಕೊಳುದು...ಹಿಂಗಾದ್ರ ಹೊಲಾ ಕಾಯುದು ಯಾರು?".

ಅವ್ವ ಬಿಸಿ ರೊಟ್ಟಿ ಮಾಡಾಕ ಸ್ಟಾರ್ಟ್ ಮಾಡಿದ್ಲು, ನಂಗು ಆಟ ಆಡಿ ಹೊಟ್ಟಿ ಹಸದಿತ್ತು...೪-೫ ರೊಟ್ಟಿ ತಿಂದ, ಅಜ್ಜನ ಕಡೆ ಹೊಗಿ ಸ್ವಲ್ಪ ಹರಿಕತೆ ಕಳಿದೆ...ಸ್ವಲ್ಪ ಹೊತ್ತಾದ ಮ್ಯಾಲೆ ಅಜ್ಜ ಸುಮ್ನ ಕಟ್ಟಿಮ್ಯಾಲೆ ಮಲಕ್ಕೊಂಡ್ ಬಿಟ್ರು. ಸ್ವಲ್ಪ ಹೊತ್ತಿಗೆ ಅಡಗಿ ಮನಿಯಿಂದಾ ವಗ್ಗರಣಿ ವಾಸನಿ ಬರಾಕ ಸೂರು ಆಯ್ತು, ಏನಪ ಇದು ಅಂತಾ ಓಡಿ ಹೊಗಿ ನೊಡಿದ್ರ, ಅಜ್ಜಿ ಉಪ್ಪಿನಕಾಯಿ ಹಾಕಕ ವಗ್ಗರಣಿ ಹಾಕಾಕತಿದ್ರು. ಅಲ್ಲೆ ಪಕ್ಕದಾಗ ಕನಿಸ್ಟ ಅಂದ್ರು ೩೫೦ ಮಾವಿನಕಾಯಿ ಕೊಯ್ದು ಹೊಳ್ ಮಾಡಿರು ಪಾತ್ರಿ ಇತ್ತು. ಅಜ್ಜಿ "ಮಾವಿನ ಕಾಯಿ ಚಲೊ ಅದಾವ ನೊಡ...೨ ವರ್ಷಕ್ಕ ಸಾಕಾಗತ್ತ...ಉಪ್ಪಿನಕಾಯಿ ಚಲೊ ಅಕ್ಕ್ಯೈತಿ...." ಅಂದು. ಆಲ್ಲೆ ಪಕ್ಕದಲ್ಲೆ ಅವ್ವ ಕೂತಿದ್ರು, ಸ್ವಲ್ಪ ಅನುಮಾನದಿಂದಾ "ಏಲ್ಲಿ ಹರಕೊಂಡ ಬಂದಿರಿ...?", ಅಂತ ಕೆಳಿದ್ದಾತಡ ನಾನು ಮಾತ್ರ ಅಲ್ಲಿ ಇರಲಿಲ್ಲಾ......ಇಡಿ ರಾತ್ರಿ ವಾಪಸ ಮನಿಗೆ ಬಂದಿಲ್ಲಾ.

ಆಗಿದ್ದಾದ್ರು ಏನಪಾ....ಇಷ್ಟಾ... ಅವತ್ತು ಬೆಳಿಗ್ಗೆ ಗೆಳೆಯ ರಾಚೊಟಿ ಮತ್ತೆ ನಾನು, ಬಾವಿ ನ್ಯಾಗ ಇಜಾಡುನು ಅಂತ ಹೊಲಕ್ಕ ಹೊಗಿದ್ವಿ. ಅಜ್ಜ ನಮ್ಮನ್ನ ನೊಡಿ "ಲೇ...ಉಡಾಳ ನನ್ ಮಕ್ಳ...ಬಾವ್ಯಾಗ ಕಲ್ಲ ಜಾರ್ ತಾವು...ಇನ್ನಾ ಚಲ್ಲೊತಂಗ ಇಜಾಡಾಕ ಬರುದಿಲ್ಲಾ...ಹೊಕ್ಕಿರನ ಮನಿಗೆ....", ಅಂತ ಜೊರಗ ಬೈದು ಮನಿಗೆ ವಾಪಸ ಕಳಿಸಿದ್ರು. ನನ್ಗು ಜಾಸ್ತಿ ಸಿಟ್ಟ ಬಂದಿತ್ತು, ಅವರು ಓಳ್ಳೆದಕ್ಕ ಹೆಳ್ತಾರ ಅನ್ನೊ ಮಾತು ಅರ್ಥ ಮಾಡಕೊಳ್ಳು ವಯಸ್ಸು ಆಗಿರಲಿಲ್ಲಾ ನಮಗ... "ನಿಮ್ಮ ಹೊಲದಾಗ ನಿಂಗಾ ಇಜಾಡಾಕ ಬಿಡುದಿಲ್ಲಲಲೆ" ಅಂತಾ ರಾಚೋಟೆ ಬೆರೆ ಅಂಗಿಸಿದ್ದಾ. ಅವತ್ತ ಮದ್ಯಾನ ವಾಪಸ ಹೊಲಕ್ಕ ರಾಚೊಟಿ ಮತ್ತೆ ನಾನು ಹೊಗಿ...ಅಜ್ಜ ಉಟ ಮಾಡು ಹೊತ್ತನ್ಯಾಗ ಕೆಳಗಿನ ಹೊಲದ ಕಡೆ ಹೊಗು ವಿಷಯ ನನಗ ಮೊದಲ ಗೊತ್ತಿತ್ತು. ಸಮಯ ನೊಡಿ...ಮಾವಿನ ಕಾಯಿ ಗಿಡಾ ಬೊಳ ಮಾಡಿ...ಅವ ಮಾವಿನ ಕಾಯಿನ ಇಬ್ಬರು ಹಂಚ ಕೊಂಡ..ಮನಿಗೆ ವಾಪಸ ಆಗಿ "ತಗೋಬೆ ಅವ್ವ...ಚಿಕನಾಳ (ಪಕ್ಕದಲ್ಲೆ ಇರುವ ಒಂದು ಹಳ್ಳಿ) ಕ್ಕ ಕ್ರಿಕೆಟ್ ಆಡಾಕ ಹೊಗಿದ್ಯಾ..ಅಲ್ಲೆ ರಸ್ತೆ ಮ್ಯಾಲೆ ಇರು ಹೊಲದಾಗ ಮಾವಿನ ಕಾಯಿ ಇದ್ವು...ಹೊಲಾ ಕಾಲಿ ಬಿದ್ದಿತ್ತು...ಕಿತಗೊಂಡ ಬಂದಿನಿ..." ಅಂತ ಹೆಳಿ, ಸಾಯಂಕಾಲದ ವರೆಗೆ ಕ್ರಿಕೆಟ್ ಆಡಾಕ ಹೊಗಿದ್ಡೆ. ವಾಪಸ ಸಂಜೆ ಬಂದಾಗ ಅಜ್ಜನ ಕಥೆ ಕೆಳಿದ್ದು....

"ಬೆಲಿ ಏದ್ದು ಹೋಲಾ ಮೆಯ್ಡಂತೆ" ಅನ್ನೊ ಗಾದೆ ಇದೆಯಲ್ಲಾ...ಅದರ ಅರ್ಥ ಗೊತ್ತಿಲ್ಲಾ ಅಂದ್ರ, ಅದಕ್ಕ ಒಂದು ಉದಾಹರಣೆ ಇದು

Thursday 20 August, 2009

ಚಿಕ್ಕ ಸಸ್ಪೆನ್ಸ ಕಥೆ

ಸಾತೊಡಿ ಫಾಲ್ಸ್ನ್ ನಲ್ಲಿ ನಡೆದ ಒಂದು ವಿಚಿತ್ರ ಸಿನಿಮಿಯ ಸನ್ನಿವೇಶ ಇಲ್ಲಿದೆ...

ಅವತ್ತು ಶನಿವಾರ್ ನಮ್ಮ ಗ್ಯಾಂಗ tour mood ನಲ್ಲಿತ್ತು, ನಾಳೆ ಪವನ engagement ಇತ್ತು, ಆದ್ರೆ ಇವತ್ತು ಮಾಡೊಕೆ ಬೆರೆ ಕೆಲ್ಸಾ ಇರಲಿಲ್ಲ ಅದಕ್ಕೆ ಸಾತೊಡಿ ಫಾಲ್ಸ್ ಹೊಗುವೆ ನಿರ್ದಾರ ಮಾಡಿದ್ವಿ. ಅದಕ್ಕೆ ಅಂತ ಒಂದು scorpio ಬಾಡಿಗೆ ಹುಬ್ಬಳ್ಳಿಯಲ್ಲಿ ತಗೋಡ್ವಿ. ಅದು ಬೆಳಗ್ಗೆ ೭ ಗಂಟೆ, ಆದ್ರೆ ನಮ್ಮ ಡ್ರೈವರ್ ಪುಲ್ಲ ಟೈಟ್ ಆಗಿದ್ರು. ಬೆಳಗ್ಗೆ ಬೆಳಗ್ಗೆ ತಿರ್ಠ ಹಾಕಿ ತೆಲಾಡತಾ ಇದ್ದಿದ್ದು ನಮ್ಮ ಕಾರಿನ ಡ್ರೈವರ್ ಮಂಜುನಾಥ, ಇವರ ಜೋತೆಗೆ ಮತ್ತೊಬ್ಬ ಖಾನ್. ದಾರಿ ಉದ್ದಕ್ಕು ನಮ್ಮ ಮಂಜುನಾಥರ ಪುರಾಣ ಕೇಳಿ ಕೇಳಿ ಸಾಕಾಗಿತ್ತು. ಹಾಗು ಹಿಗು ಏರಡು ಮೂರು ಸಾರಿ ದಾರಿ ತಪ್ಪಿ...ಅಲ್ಲೆ ಸುತ್ತಾಡಿ...ಕೊನೆಗು ಸಾತೊಡಿ ಪಾಲ್ಸ್ ತಲುಪಿದ್ಡು ಅಕೀಲ್, ಸುಬಿನ್, ಗಣೇಶ್ ಮತ್ತೆ ನಾನು.

ಪಾಲ್ಸ್ನ್ ನಲ್ಲಿ ಸಕ್ಕತ್ತ ಮಜಾಮಾಡಿ ವಾಪಸ್ ಕಾರ್ ಹತ್ರ ಬಂದ್ವಿ, ಈಗ ಸುರುವಾಯ್ತು ನೋಡಿ ಕಥೆ.....
ಬರಿಯೊದು ಬೆಜಾರು, ಅದಕ್ಕೆ audio ಬ್ಲಾಗ್ ಮಾಡೊದು ಸಕತ್ತಾಗಿರುತ್ತೆ, ಏನಂತಿರಾ?

Tuesday 17 March, 2009

ಬೆಟ್ಟದ ನೆಲ್ಲಿ, ಸಮುದ್ರದ ಉಪ್ಪು

ಏಲ್ಲೊ ಕೆಳಿದ ಕಥೆ.....

ನಾನು, ವೆಂಕ, ಸೀನ – ಆತ್ಮೀಯ ಗೆಳೆಯರು. ಒಂದೇ ರೂಮಿನಲ್ಲಿದ್ದು ಇಂಜಿನಿಯರಿಂಗ್ ಪಾಸ್ ಮಾಡಿದವರು. ಹುಡಗಿಯರ ಬಗ್ಗೆ ಹಲವಾರು ಕನಸುಗಳನ್ನು ಹಂಚಿಕೊಂಡ ನಮಗೆ ಈಗ ಮದುವೆಯ ವಯಸ್ಸು.

ಮೊದಲು ಮದುವೆಯಾದವನು ವೆಂಕ. ಮದುವೆಯ ಮಂಟಪದಲ್ಲಿ ಅವನ ಹೆಂಡತಿಯನ್ನು ಪ್ರಥಮ ಬಾರಿ ನೋಡಿದಾಗ, ಸೀನ ಮತ್ತು ನನಗೆ ಅವಳು ಚೆನ್ನಾಗಿಲ್ಲವೆನ್ನಿಸಿಬಿಟ್ಟಿತು. ನನಗಂತೂ ಅವಳ ಹಲ್ಲುಗಳು ಉಬ್ಬೆನ್ನಿಸಿತು. ಸೀನ ಕೂಡಾ “ಹಲ್ಲೇನೋ ಪರವಾಗಿಲ್ಲ, ಆದರೆ ಸೊಂಟ ದಪ್ಪ” ಅಂತ ಮೂಗು ಹಿಂಡಿದ. ನಾವೆಲ್ಲಾ ಕಂಡ ಕನಸಿನ ಕನ್ಯೆಯರಿಗೂ, ಇವಳಿಗೂ ಹೋಲಿಕೆಯಿಲ್ಲವೆಂದು ಇಬ್ಬರೂ ನಿರ್ಧರಿಸಿದೆವು. ಊಟಕ್ಕೆ ಕುಳಿತಾಗ ಹಾರ-ಬಾಸಿಂಗಗಳ ಸಮೇತ ನಮ್ಮ ಬಳಿ ಬಂದು ವೆಂಕ “ಹೇಗಿದಾಳೋ?” ಅಂತ ಕಳಕಳಿಯಿಂದ ಕೇಳಿದ. “ತುಂಬಾ ಚೆನ್ನಾಗಿದಾಳೆ. ಯು ಆರ್ ಲಕ್ಕಿ....” ಅಂತ ಇಬ್ಬರೂ ಒಟ್ಟಿಗೇ ಹೇಳಿದೆವು. “ಥ್ಯಾಂಕ್ಸ್ ಕಣ್ರೋ.... ನಾಲ್ಕೈದು ಹುಡುಗಿಯರನ್ನ ನೋಡಿದ್ದೆ. ಆದರೆ ಇವಳನ್ನ ನೋಡಿದ ಮೇಲೆ ಬೇರೆ ಹುಡುಗಿಯರನ್ನ ನೋಡಬೇಕು ಅನ್ನಿಸಲೇ ಇಲ್ಲ” ಅಂತ ಹೆಮ್ಮೆಯಿಂದ ಹೇಳಿಕೊಂಡ. ನಾನು, ಸೀನ ಮುಖ ಮುಖ ನೋಡಿಕೊಂಡೆವು.

ಮತ್ತೆ ಆರೇ ತಿಂಗಳಿಗೆ ಸೀನನ ಮದುವೆಯೂ ಆಯಿತು. ವಿಚಿತ್ರವೆಂದರೆ ಅವನ ಹೆಂಡತಿಯೂ ನನಗೆ ಚೆನ್ನಾಗಿಲ್ಲವೆನಿಸಿತು. ಮೂಗು ಸ್ವಲ್ಪ ಮೊಂಡು! ವೆಂಕನಂತೂ “ಹೋಗಿ ಹೋಗಿ ಟೆನ್ನೀಸ್ ಕೋರ್ಟನ ಮದುವೆಯಾಗಿದಾನಲ್ಲೋ! ಎಂಥಾ ’ಖರಾಬ್’ ಟೇಸ್ಟ್ ಮಾರಾಯ.... ಕಡೇ ಪಕ್ಷ ನನ್ನನಾದರೂ ಒಂದು ಮಾತು ಕೇಳಬಹುದಿತ್ತಲ್ಲ” ಅಂತ ಪೇಚಾಡಿದ. ನಮ್ಮ ಗೊಣಗಾಟವೇನೇ ಇದ್ದರೂ, ಸೀನ ಬಳಿ ಬಂದಾಗ “ಯು ಆರ್ ಲಕ್ಕಿ” ಅಂತ ಕೈ ಕುಲುಕಿದೆವು. ಸೀನ ನನ್ನೊಬ್ಬನನ್ನೇ ಪಕ್ಕಕ್ಕೆ ಕರೆದು “ವೆಂಕನ ತರಹ ಹಾರಿಬಲ್ ಆಯ್ಕೆ ನಂದಲ್ಲ, ಅಲ್ವೇನೋ?” ಅಂತ ಕೇಳಿದ. “ನೊ, ನೊ....” ಅಂತ ನಾನವನನ್ನು ಒಲ್ಲದ ಮನಸ್ಸಿನಿಂದ ಸಮ್ಮತಿಸಿದೆ.

ನಾನಂತೂ ಹುಡುಗಿಯ ಆಯ್ಕೆಯಲ್ಲಿ ತುಂಬಾ ಜಾಗರೂಕನಾಗಿದ್ದೆ. ಉಬ್ಬು, ಹಲ್ಲು, ದಪ್ಪ, ಸೊಂಟ, ಮೊಂಡು ಮೂಗು...ಯಾವುದೂ ಇಲ್ಲವೆಂದು ಖಾತರಿ ಪಡಿಸಿಕೊಂಡೆ. ಆದರೂ ಮದುವೆಯ ದಿನ ಗೆಳೆಯರೇನನ್ನುವರೋ ಎಂಬ ಆತಂಕದಲ್ಲಿದ್ದೆ. ಪುರೋಹಿತರು, ವೀಡಿಯೋದವರು, ಬಂಧುಬಳಗದವರು ಕಣ್ಣು ತಪ್ಪಿಸಿ ಗೆಳೆಯರ ಬಳಿ ಹೋಗಿ “ಹೇಗಿದಾಳೋ?” ಅಂತ ಉದ್ವೇಗದಲ್ಲಿ ಕೇಳಿದೆ. “ಯು ಆರ್ ಲಕ್ಕಿ....” ಅಂತ ಇಬ್ಬರೂ ನನ್ನ ಕೈ ಕುಲುಕಿದರು. ನನಗೆ ನಂಬಿಕೆಯಾಗಲಿಲ್ಲ. “ಸುಳ್ಳು ಹೇಳಬೇಡ್ರೋ....ನಿಜ ಹೇಳಿ....ನಂಗೇನೂ ಬೇಜಾರಾಗಲ್ಲ” ಅಂತ ಬೇಡಿಕೊಂಡೆ. “ಸುಳ್ಳು ಯಾಕೆ ಹೇಳೋಣ. ನಿಜವಾಗಿಯೂ ನೀನು ಲಕ್ಕಿ...” ಅಂತ ಮತ್ತೊಮ್ಮೆ ನನ್ನ ಕೈ ಕುಲುಕಿ, ಒಬ್ಬರಿಗೊಬ್ಬರು ಮುಖ ನೋಡಿಕೊಂಡರು!!!

Wednesday 11 February, 2009

ವಿಚಾರ ದ್ರುಷ್ಟಿಕೋನ...

ಪ್ರತಿ ದಿನ....ಪ್ರತಿ ಕ್ಷಣ ಕೆಲವು ಘಟನೆಗಳು ನಮ್ಮ ಜೀವನದಲ್ಲಿ ಹಾಗೆ ಟಿವಿ ದಾರವಾಹಿತರ ಮೂಡಿ ಹೋಗತಾ ಇರುತ್ತೆ. ಅದರಲ್ಲಿ ಕೆಲವು ಸುಲಭವಾಗಿ ಮರೆತು ಮರೆಯಾಗುತ್ತೆ...ಆದ್ರೆ ಕೆಲವು ನಾವು ಮರೆಯಾಗುವರೆಗು ಹಾಗೆ ಹಸಿಯಾಗಿರುತ್ತೆ...ಹಾಗೆ ಒಂದು ಸಂದೇಶವನ್ನು ಕೊಟ್ಟು ಹೋಗುತ್ತೆ. ಅದನ್ನ ಹೇಗೆ ಅರ್ಥ ಮಾಡಕೊಳ್ಳೊದು ಅನ್ನೋದನ್ನ ಮಾತ್ರ ಪ್ರತಿ ವ್ಯಕ್ತಿಯ ಅವನ ವಿಚಾರ ದ್ರುಷ್ಟಿಕೋನ ನಿರ್ಧರಿಸುತ್ತಾ?.

ಅವತ್ತು ರಾತ್ರಿ ೧ ಗಂಟೆ ಸಮಯ, ಬಾಗಿಲು ತಟ್ಟಿ ತಂದೆಯವರನ್ನ ಕೂಗೋ ಹಾಗಿತ್ತು. ನಡು ರಾತ್ರಿ ಇದ್ಯಾರಿದು, ಒಮ್ಮೆ ಕಿಡಕಿಯಿಂದ ಇಣುಕಿ ನೊಡಿದರೆ ಅದು ಪಕ್ಕದ ಬಿದಿಯಲ್ಲಿ ವಾಸಿಸುವ ಮೇಸ್ತ್ರಿ ಮತ್ತೆ ಅವರ ಕೆಲವು ಗೆಳೆಯರು. ತಂದೆಯವರು “ಏನ್ರಿ ಮೀಸ್ತ್ರಿ ಇಷ್ಟೋತ್ತಲ್ಲಿ, ಏನು ಸಮಾಚಾರ...” ಅದಕ್ಕೆ ಮೇಸ್ತ್ರಿ “ಸರ್, ನಿಮ್ಮ ಮನ್ಯಾಗ ಯಾರರ ಸಣ್ಣ ಹುಡುಗ್ರು ಅದಾರನ್ರಿ.....??”. ನಡು ರಾತ್ರಿಲಿ ಬಂದು, ಈ ಪ್ರಶ್ನೆ ಕೆಳಿದ್ರೆ ಯಾರಿಗೆ ಆಶ್ಚರ್ಯ ಆಗೋಲ್ಲ. ಮೇಸ್ತ್ರಿ ಹಾಗೆ ಮುಂದುವರಿಸಿ.... “ಇದ್ರಾ ಅವರನ್ನ ಮಲಗಾಕ ಬಿಡಬ್ಯಾಡ್ರಿ.....ಬೆಳಗು ಮೂಂಜಾನಿ ತನಕಾ...”.

ಇದೆನಪ್ಪಾ ಗ್ರಹಚಾರ ಅಂತ ವಿಚಾರ ಮಾಡೊ ಮೊದಲು ಕನಿಷ್ಟ ನಾಲ್ಕು ಗಂಟೆ ಹಿಂದೆ ಹೋಗೊಣ....ಅಂದ್ರೆ ರಾತ್ರಿ ೧೦ ಗಂಟೆ ಸಮಯ. ಅವತ್ತು ರಾತ್ರಿ ಪಂಚಾಂಗದ ಪ್ರಕಾರ ರಾತ್ರಿ ೧೨ ನಂತರ ಚಂದ್ರ ಗ್ರಹಣ ಆಗೊದಿತ್ತು. ಅದಕ್ಕೆನು ಯಾರು ತಲೆ ಕೆಡಸಿಕೊಂಡಿರಲಿಲ್ಲ, ಯಾಕಂದ್ರೆ...ಗ್ರಹಣ ಮಾಮುಲಿ ನೋಡಿ. ಮಾಡಿರೊ ಅಡಿಗೆನೆಲ್ಲ ಮೂಗಿಸಿ...ಜೋತೆಗೆ “Crime Diary” ನೋಡಿ ಇನ್ನೆನು ಮಲಗೊ ಸಮಯ.... ಆದ್ರೆ ರಾತ್ರಿ ೧೦:೩೦ ಸಮಯ, ಗುಲಭರ್ಗದ ಒಬ್ಬ್ ಸ್ವಾಮೀಜಿ ಒಂದು ಭವಿಷ್ಯ ನೂಡಿದೆ ಬಿಟ್ರು. “ಈ ಗ್ರಹಣ ಮಕ್ಕಳಿಗೆ ಆಗಿ ಬರೋದಿಲ್ಲ, ಓಳಿತಲ್ಲ.....ಅದಕ್ಕೆ ಇವತ್ತು ಯಾರು ತಮ್ಮ ಮಕ್ಕಳನ್ನ ಮಲಗೊಕೆ ಬಿಡಬೆಡಿ...ಅಪ್ಪಿತಪ್ಪಿ ಮಲಗಿದ್ರೆ...ಬೆಳಗ್ಗೆ ಏಳೊ chance....ಕಡಿಮೆ!!!!”. ಈ ಒಂದು ಸ್ವಾಮಿಜಿಯವರ ಮಾತು ಬರಿ ಗುಲಭರ್ಗಕ್ಕೆ ಸಿಮಿತ ವಾಗಿದ್ರೆ ಚೆನ್ನಾಗಿರತಿತ್ತೆನೋ!!!!.....ಆದ್ರೆ ಅದು ಹಾಗಾಗಲಿಲ್ಲವೆ...ಬಿಧರ್, ವಿಜಾಪುರ, ಬಾಗಲಕೋಟೆ, ಅಥಣಿ, ಬೆಳಗಾವಿ,ಗದಗ, ದಾರವಾಡ, ರಾಯಚೂರು, ಕೋಪ್ಪಳ...ಜಿಲ್ಲೆಗಳಿಗೆ ಹಬ್ಬೊಕೆ ಬರಿ ೫೦ ರಿಂದ ೮೦ ನೀಮಿಷಗಳು ಸಾಕಾಯ್ತು ನೋಡಿ. ಅವತ್ತು ಪಾಪ ಏಷ್ಟು ಚಿಕ್ಕ ಹುಡುಗ್ರುದು ಮತ್ತೆ ಪಾಲಕರ ನಿದ್ದೆ ಹಾಳಾಗಿದೆಯೊ?. ಆದ್ರೆ ಸ್ವಾಮಿಜಿ ಮಾತ್ರ ರಾತ್ರೊ ರಾತ್ರಿ ಪ್ರಸಿದ್ದಿ ಗಿಟ್ಟಿಸಿ ಕೊಂಡಿದ್ದಾಯ್ತು. ಈ ಸುದ್ದಿನೆ, ಅವತ್ತು ರಾತ್ರಿ ೧ ಕ್ಕೆ ತಂದೆಯವರ ಕಿವಿಗೆ ಹಾಕಿದ್ದು ಆ ಮೇಸ್ತ್ರಿ.

ಈ ಮೇಲಿರೊ ಒಂದು ಚಿಕ್ಕ ಘಟನೆಯಲ್ಲಿ ನೀವು ಬಾಗಿಯಾಗಿದ್ರೆ....ಈ ಘಟನೆಯಿಂದ ನಾವು ತಿಳಿದುಕೋಳ್ಳುವದು ಏನಾದ್ರು ಇದ್ರೆ.....ಏನದು? ನನ್ನ ಬಾಲ್ಯ ಸ್ನೆಹಿತ...ಮೆಲಾಗಿ ಒಬ್ಬ ಉತ್ತಮ ಶಿಕ್ಷಕ, ಅವನ ವಿಚಾರ ದ್ರುಷ್ಟಿಕೋನ ಹಿಗಿತ್ತು. ಈ ಘಟನೆಯಿಂದ ನಾವು ೩ ಸಂಗತಿಗಳನ್ನ ತಿಳಿದು ಕೋಳ್ಳಬಹುದು.

ಒಂದನೆಯದಾಗಿ: ನಾವು ೨೧ನೆ ಶತಮಾನದಲ್ಲಿದ್ದು....ಸಾಮಾಜಿಕವಾಗಿ ಬೇಳವನಿಗೆ ಅಗಿದ್ರು ಕೊಡ, ಇನ್ನು ಮೂಡ ನಂಬಿಕೆಗಳಿಗೆ ಏಷ್ಟು ಬೆಲೆ ಕೋಡುವ ಜನಗಳಿದ್ದಾರೆ.
ಏರಡನೆಯದಾಗಿ: ಈ ಸಂಪರ್ಕ ಮಾದ್ಯಮಗಳ ಹಾವಳಿ ಏಷ್ಟರಮಟ್ಟಿಗಿದೆ ಅಂದ್ರೆ....ಕೆವಲ ೫೦ ರಿಂದ ೮೦ ನಿಮಿಷದಲ್ಲಿ ಕನಿಷ್ಟ ಪಕ್ಷ ಅಂದ್ರು ೧೨ ಜಿಲ್ಲೆ ಗಳಿಗೆ ಸ್ವಾಮಿಗಳ ವಾಣಿ...ಹಬ್ಬಿತ್ತು.

ಇನ್ನು, ಕೊನೆಯದಾಗಿ.....ಮೆಸ್ತ್ರಿ ಅಂತ ಮೂಗ್ದ ಜನ...ರಾತ್ರಿ ತಾವು ಮಲಗದೆ, ಪಕ್ಕದ ಮನೆಯವರನ್ನ...ಬಿದಿಯಲ್ಲಿ ಇರುವ ಏಲ್ಲ ಜನರ ಮನೆಗೆ ಹೋಗಿ...ವಿಚಾರಿಸಿದ್ರು......ಇದರಿಂದ ನಾವು ತಿಳಿದು ಕೊಳ್ಳುವದು...ಮೂಕ್ಯವಾಗಿ...ನಮ್ಮ ಜನಗಳ ಮದ್ದೆ ಇರುವ ಪ್ರಿತಿ, ವಿಷ್ವಾಸ ಮತ್ತು ಕಾಳಜಿ..... :)

Wednesday 7 January, 2009

The only man in the Cabinet



Bangalore Dec 6, 2008 Page 8 - ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಮೂಡಿಬಂದ ಉತ್ತಮ ಲೇಖನ. "Munich" ಚೀತ್ರ ನೋಡಿ, ತಿಳಿಯದೆ ಹೊದ್ರೆ ಈ ಕಥೆ ಓದಿ.
ಇಮೇಜ್ ಕ್ಲಿಕ್ಕ ಮಾಡಿ...

ಭೋಪಾಲ ಅನಿಲ ದುರಂತ: ಮರೀಚಿಕೆಯಾದ ನ್ಯಾಯ - ಪ್ರೀತಿಕಾ ಪಿಳಿಂಜ



Bangalore Dec 2, 2008 Page 8 - ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಮೂಡಿಬಂದ ಒಂದು ಉತ್ತಮ ಲೇಖನ. ಇಮೇಜ್ ಕ್ಲಿಕ್ಕ ಮಾಡಿ...

Tuesday 15 July, 2008

ಬಿಡದೆ ಹಿಂಬಾಲಿಸುವವ…..

ಬೆಳಗಿನ ಜಾವ ೮ ಗಂಟೆ ಇರಬಹುದು, office ನೆಲಹಂತದಲ್ಲಿ ಲಿಫ್ಟಗಾಗಿ ಕಾಯುತ್ತಿದ್ದೆ. ಮೆಲ್ಚಾವಣಿಯಿಂದ ನೆಲಮಹಡಿಗೆ ತಲುಪುವ ರಸ್ತೆಯಿಂದ ಸೂರ್ಯನ ಕಿರಣಗಳು ಬಳ್ಳಿಯಹಾಗೆ ಜಾರಿ ನೆಲ ಮಹಡಿಯನ್ನು ಹಬ್ಬುವ ಹಾಗಿತ್ತು…. ಹಾಗೆ ದೊಡ್ಡದಾಗಿ ಹಬ್ಬಿಕೊಂಡ ಆಲದ ಮರದ ನೆರಳುಕೂಡ ನೆಲಮಹಡಿ ತಲುಪಿ, ನನ್ನ ನೆರಳನ್ನು ಆಕ್ರಮಿಸಿ ಕೊಂಡಿತ್ತು. ಅದೆ ಲಿಪ್ಟಗಾಗಿ ಕಾಯುತ್ತಿದ್ದ ಇನ್ನುಳಿದವರನ್ನ ಗಮನಿಸಿದೆ, ಸ್ವಲ್ಪ ಕತ್ತಲೆ ಇತ್ತು ಅಥವಾ ನಿದ್ದೆಯ ಗೂಂಗೀನಲ್ಲೊ.... “ಅವಳೇ ಇರಬಹುದು!!! ಇಲ್ಲಾ… ಅವಳು ಇಸ್ಟು ಬೇಗ office ಬರೊಲ್ಲಾ, ಮತ್ತಾರೊ……….” ಅಂದುಕೊಂಡು ಸುಮ್ಮಗಾದೆ, ಆದ್ರೆ ಮನಸ್ಸು ಸುಮ್ಮಗಾಗೊ ಗಿರಾಕಿ ಅಲ್ಲಾ, ಮತ್ತೆ ಅವಳನ್ನೇ ಗೂರಾಯಿಸಿದೆ…. “ಹಮ್ಮ್!!! ಅವಳೇ…..ಗ್ಯಾರಂಟಿ…..ರೂಪಾ”, ಹೆಸರಿಗೆ ಮೋಸಮಾಡದ ನಸುಗಪ್ಪು ಕ್ರೀಷ್ಣ ಸುಂದರಿ, ಮೂರು ತಿಂಗಳ ಹಿಂದೆ ಕಂಪನಿ ಸೇರಿಕೊಂಡವಳು. ಮೂಲತಹ ಕೆರಳದವಳು, ಆದ್ರೆ ವಿದ್ಯಾಭ್ಯಾಸ ತಮಿಳುನಾಡಿನ ಚೇನೈ ಸಿಟಿಯಲ್ಲಿ. ನೋಡಿದ ಮೊದಲ್ನೆ ದಿನಾನೆ ಆಫೀಸನಲ್ಲಿರೋ ಸಾಕಸ್ಟು ಸಂಬಾಯಿತ ಹುಡುಗರ ಮನಸ್ಸಿನ ಪ್ರಶಾಂತ ಅಲೆಗಳನ್ನು ಡಿಸ್ಟರ್ಬ್ ಮಾಡಿದವಳು, ಅದರಲ್ಲಿ ನಾನು ಒಬ್ಬ!!!. ಸ್ವಲ್ಪ ವಿಚಾರಿಸಿದರೆ!!!, ಅದು ಪ್ರೀತಿ ಮಾತ್ರ ಅಗಿರಲಿಲ್ಲ ಅದೇನೊ attraction ಅಂತಾರಲ್ಲ…ಹಾಗೆ ಇರಬಹುದೆನೋ...ಈ ವಯಸ್ಸಿನಲ್ಲಿ ಇದು ಸಹಜವಾಗಿ ಬರೋದು ನೋಡಿ!!!.

ಏರಡು…ಮೂರು ಸಾರಿ ಅವಳನ್ನೆ…ಅವಳಿಗರಿವಿರದ ಹಾಗೆ ನೋಡಿದೆ…ಮನಸ್ಸಿನಲ್ಲಿ ಕೆಟ್ಟ ಭಾವನೆ ಮಾತ್ರ ಇರಲಿಲ್ಲ. ಸ್ವಲ್ಪ ಸಮಯದ ನಂತರ ಅವಳು ನನ್ನ ನೋಟವನ್ನು ಗಮನಿಸಿ ಒಂದು ಚಿಕ್ಕ ನಗೆ ಕೊಟ್ಲು. ಅಯ್ಯೊ!!!! ಇನ್ನೆನು ಜೀವನ ಸಾರ್ಥಕವಾಯ್ತು….ಮಾತಾಡಿಸಿ ಬಿಡ್ಲಾ… ಅವಳನ್ನ ಸಾಕಸ್ಟು ಸಾರಿ ಮಾತಾಡಿಸಿದ್ದೆ….ಆದ್ರೆ ಇವತ್ತು ಯಾಕೋ ಮಾತು ಮನಸ್ಸಿನ ಬಾಗಲು ತೆರದು ಹೋರಗೆ ಬರಲಿಲ್ಲ. ಇನ್ನೆನು ಧೈರ್ಯ ಮಾಡಿ ಮಾತಾಡಿಸಲು ಮುಂದಾದೆ….ಅವಳನ್ನ ಒಂದು ಸಾರಿ ಗಮನಿಸಿದೆ…ಅಸ್ಟರಲ್ಲೆ ಅವಳು ಲಿಫ್ಟ ಬೇಡ ಅಂತ ನಿರ್ಧರಿಸಿ… ಮೆಟ್ಟಿಲು ಕಡೆ ಹೆಜ್ಜೆ ಹಾಕಿದ್ಲು… ಅಯ್ಯೊ ಏನೋ ಮಾತಾಡ ಬೇಕಿತ್ತು, ಸಾದ್ಯವಾಗಲಿಲ್ಲ ಅಂತಾ ವಿಚಾರಿಸ್ತಿದ್ದಹಾಗೆ….ಲಿಫ್ಟ ಮಿಸ್ಸ್ ಮಾಡಕೋಂಡೆ, ಇನ್ನುಳಿದವರೂ ಕಾಲಿ ಆದ್ರು….ಒಬ್ಬನೆ ಅಲ್ಲೆ ಸ್ಸಲ್ಪ ಸಮಯ ನಿಂತೆ. ಮನಸ್ಸಿನಲ್ಲಿ ಸಾವಿರ ಮಾತು…ಅದೇ ಗೂಂಗು….ಅಸ್ಟರಲ್ಲಿ ಪಕ್ಕದಲ್ಲಿ ಯಾರೋ ಬಂದು ನಿಂತಹಾಗೆ ಅನಿಸ್ತು. ಪಕ್ಕದಲ್ಲಿ ನಿಂತಿರೊ ವ್ಯಕ್ತಿನ ಒಂದು ಸಾರಿ ಗಮನಿಸಿದೆ...ನೋಡಲು ಭಯಂಕರವಾದ…ಮೋಕದಲ್ಲಿ ಬೆರೆಯವರನ್ನು ಹಿಯಾಳಿಸಿ….ಅನಗಿಸುವ ನಗು ತುಂಬಿ ಕೋಂಡಿದ್ದ… ಕಪ್ಪನೆಯ… ಭಯ ಮೂಡಿಸುಮ… ಚಿಕ್ಕ ಮಕ್ಕಳನ್ನು ಹೆದರಿಸಲು ಅಜ್ಜಿ ಕರೆದಾಗ ಬರುವ….ಗುಮ್ಮನಂತಿತ್ತು. ಅದು ನನ್ನನ್ನೆ ನೋಡಿ ಹಿಯಾಳಿಸಿ ನಗುತ್ತಾ ನನ್ನ ಹತ್ತಿರಕ್ಕೆ ಬರುತ್ತಿತ್ತು… ಭಯದಿಂದ ನಾನು ಲಿಫ್ಟ ಬಿಟ್ಟು…ಮೆಟ್ಟೀಲು ಹಿಡಿದು ನಡೆಯಲು ಪ್ರಾರಂಬಿಸಿದೆ. ಅದು ಮಾತ್ರ ನನ್ನ ಹಿಂಬಾಲಿಸುವದನ್ನು ಬಿಡಲಿಲ್ಲ… ಅದರ ಮೋಕ ಮತ್ತೊಮ್ಮೆ ನೋಡಲು ನನ್ಗೆ ಅಂಜಿಕೆ ಇತ್ತು. ಹಾಗೆ ಮೆಟ್ಟಿಲು ಏರುತ್ತ, ಕಟ್ಟಡದ terrace ಮುಟ್ಟಿದ್ದೆ…ಅದು ಮಾತ್ರ ನನ್ನ ಬೆನ್ನು ಬಿಡಲಿಲ್ಲ.

ಇನ್ನು ಮುಂದೆ ಹೋಗೊದಕ್ಕೆ ಬೇರೆ ದಾರಿ ಇರಲಿಲ್ಲ. ಅದನ್ನು ಧೈರ್ಯವಾಗಿ ಎದರಿಸುವದನ್ನು ಬಿಟ್ಟರೆ ಬೇರೆ ದಾರಿ ಇಲ್ಲ ಅಂದುಕೊಂಡು…. ಮನಸ್ಸಿನಲ್ಲಿ ಧೈರ್ಯ ತುಂಬಿಕೊಂಡೆ…. ಮತ್ತೋಮ್ಮೆ ಅದನ್ನು ನೋಡಲು ಮನಸ್ಸಿಲ್ಲದಿದ್ದರು ಅದರ ಕಡೆ ಮೋಕಮಾಡಿ…. ಮೆಲ್ಲನೆ ನನ್ನ ಕಣ್ಣುಗಳನ್ನ ತೆರೆದೆ. ಅದನ್ನೊಮ್ಮೆ ಸಿಟ್ಟಿನಿಂದ….ಗಮನಿಸಿದೆ. ಅದು ನನಗೆ ಗೊತ್ತಿರುವ ವ್ಯಕ್ತಿ!!! ದಿನನಿತ್ಯ ನನ್ನನು ಹಿಂಬಾಲಿಸುವವ… ಅದು ಬೆರೆ ಯಾರು ಅಲ್ಲ….ನನ್ನ ಸ್ವಂತ “ನೆರಳು” ನನ್ನನು ಹೀಗೆ ಹಿಂಬಾಲಿಸುತ್ತಿತ್ತು. ಅದು ನನ್ನಲಿ ಅಡಗಿರುವ ಅಂಜಿಕೆ….ಕೆಲವು ವಿಷಯದಲ್ಲಿರುವ ಭಯವನ್ನು ಪ್ರತಿಬಿಂಬಿಸುವ ಪ್ರತಿರೂಪವಾಗಿತ್ತು. ಅದು ಗುಮ್ಮ ಅಲ್ಲ ಅನ್ನೊ ಸಮಾಧಾನ ಇತ್ತು. ಆದ್ರೆ ಮನಸ್ಸಿನಲ್ಲಿ ಅಡಗಿರುವ ಭಯವನ್ನು ಕಿತ್ತು ಹಾಕುವ ವರೆಗು, ಮನಸ್ಸಿನ ಪ್ರತಿಬಿಂಬದ ರೂಪವಾಗಿರುವ ಈ ನೆರಳು ಮಾನವನ ಬೆನ್ನು ಬಿಡುವ ಆಸಾಮಿ ಅಲ್ಲ ಅನಿಸ್ತು.

ಅಸ್ಟರಲ್ಲಿ….ಅಣ್ಣ ಇಟ್ಟಿರುವ alarm ಕೆಳಿಸ್ತು, ಕಣ್ಣುಗಳನ್ನ ಮೆಲ್ಲನೆ ತೆರೆದೆ. ಬಿಗಿಯಾಗಿದ್ದ ಕೋರಳನ್ನ ಮೆಲ್ಲನೆ ಹೊರಳಿಸಿ ಗಮನಿಸಿದೆ…..ಪಕ್ಕದಲ್ಲಿ ಗುಮ್ಮ ಇರಲಿಲ್ಲ!!!!!