Tuesday 24 June, 2008

ಅಕ್ಟೋಬರ್ ೨ನೆ ದಿನ ಎರಡು ಮೊಟ್ಟೆ ಕೊಟ್ಟೆ ಮೇಸ್ಟ್ರುಗೆ

ಒಂದನೆ ತರಗತಿಯಲ್ಲಿದ್ದೆ ವ್ಯಾಸಂಗದಲ್ಲಿ ಬೊಟ್ಟೋಮನಲ್ಲಿದ್ರು ಕಿತಬಿ ಉಡಾಳತನದಲ್ಲಿ ಮುಂದಿದ್ದೆ. ಪಕ್ಕದ ಮನೆಲಿ ಬೆಕ್ಕು ಹಾಲು ಕೂಡುದೊದ್ರೆ ಗಂಜೀಹಾಳ ಸಂಗಪ್ಪಾರ ಮೊಮ್ಮಗ ಆನಂದಾನೆ ಕುಡದಾ ಅನ್ನೊ ಜನಪ್ರೀಯತೆ ಬೆಳಸಿಕ್ಕೊಂಡಿದ್ದೆ. ಏನಿದ್ದು ಬೆಕ್ಕಿಂದೆ ಅದ್ರುಸ್ಟ ಅನ್ನಿ, ಯಾರದೊ ದುಡ್ಡು ಯಲ್ಲಮ್ಮನ ಜಾತ್ತ್ರಿ. ಇಸ್ಟೆಲ್ಲ ಇರ್ಬೆಕಾದ್ದೆ ಮನೆಲಿ ಏಂಟಾಣೆ ಕೊಡಬೆಕಾದ್ರು ವಿಚಾರ ಮಾಡೊದು ಸಹಜ. ಈ ಪ್ರೊಬ್ಲೆಮ್ ಬಗಿಹರಿಸೊಕೆ ಅಂತಾ ನಮ್ಮಜ್ಜಾ ಒಂದು ಪ್ಲಾನ್ನ್ ಮಾಡಿದ್ರು:

ಏಂಟಾಣೆ ಬೇಕಾದ್ರೆ ದಿನಾ ಮನೆಲಿರೊ ಮೂರು ಹಸ್ಸು ಮತ್ತು ನಾಲ್ಕು ಯೆತ್ತಿನ ಸಗೀಣೆ ಬಳ್ದು, ತಿಪ್ಪಿಗೆ ಹಾಕಿಬರಬೆಕು. ನಾಲ್ಕಾಣೆ ಬೇಕಾದ್ರೆ ಮನೆಲಿರೊ ಇಪ್ಪತ್ತು ದೇವರ ಫೊಟೊ ಪೂಜೆ ಮಾಡಬೇಕು. ನನ್ನ ಆಯ್ಕೆ ಒಂದನೆದೆ ಅಗಿತ್ತು, ಯಾಕಂದ್ರೆ ಕೆಲಸ ಕಡಿಮೆ ದುಡ್ಡು ಜಾಸ್ತೀ ನೋಡಿ. ಹಿಗೆ ಕಸ್ಟಾಪಟ್ಟು ಸಗಿಣೆ ಬಳ್ದು, ಪೊಕೇಟ್ಟ್ಟ್ನಲ್ಲಿ ಸ್ವಲ್ಪ ಚಿಲ್ರೆ ಗೋಲಿಗುಂಡ ಕರಿದಿಸೋಕೆ ಅಂತಾ ಇಟ್ಕೊಂಡಿದ್ದೆ.

ಅಗ್ಲೆ ಅಕ್ಟೊಬರ್ ರಜೆದಿನಾ ಬಂದಿತ್ತು ರಜೆಲಿ ಗೋಲಿ, ಚಿನಿಪಣಿ ಆಡೊ ಸಮಯ ಕರಿದಿಸೊಕೆ ಚಿಲ್ರೆ ಬೇಕಲ್ಲ. ಊರಲ್ಲಿ ಏರಡು ಶಾಲೆ, ನಾನು ಏರಡನೆ ನಂಬರ್ ಶಾಲೆಲಿ ಓದತಿದ್ದೆ. ಶಾಲೆ ಮನೆಗೆ ಹತ್ರಾನೆ ಹತ್ತು ಹೆಜ್ಜೆ ಅಸ್ಟೆ. ಆ ದಿನ ಅಕ್ಟೊಬರ್ ೨, ಮಹಾತ್ಮಗಾಂದಿ ಜನ್ಮದಿನಾ. ಯಾವತ್ತು ಇಲ್ಲದೊನು ಅವತ್ತು ಒಂದನೆ ಸಾಲಲ್ಲೆ ಕುತ್ಗೋಂಡೆ, ಯಾಕಂದ್ರೆ ಜಲ್ದಿ ಸ್ವೀಟ ಚುರಮರಿ ಮತ್ತೆ ಖಾರಾ ತಗೊಂಡು ಜಾಗಾಬಿಡೋಕೆ. ಏದರ್ಗಡೆ ಮಹಾತ್ಮಗಾಂದಿ ಫೋಟೊ, ಅದರಪಕ್ಕದಲ್ಲೆ ನಮ್ಮ ಸರ್. ಗಾಂಧಿ ಮತ್ತು ನಮ್ಮ ಮೇಸ್ಟ್ರಗೆ ಬರಿ ಒಂದರಲ್ಲೆ ಹೊಲಿಕೆ ಇತ್ತು!!!. ಗಾಂಧಿ ಫೋಟೊನ ಮತ್ತೆ ನಮ್ಮ ಸರ್‍ನ ಹೋಲಿಕೆ ಮಾಡ್ತಾ
ಕುತ್ಗೋಂಡಿದ್ದೆ, ಏಲ್ಲಿಂದಾ ಬಂತೊ ಕೈ ಸಿದಾ ಕಿಸೇಲಿರೊ ಏರಡು ರೂಪಾಯಿನ ಕಿತ್ಗೊಂಡೆ ಬಿಟ್ಟು. ಕಸ್ಟಾಪಟ್ತು ಸಗಿಣೆ ಬಳ್ದು ಗಳಿಸಿದ ಕಾಸೂ ಸಿಟ್ಟು ಬರದೆ ಇರುತ್ತಾ, ಇನ್ನೆನು ಕೈ ಹಿಡದು ಕಡಿಬೇಕು ಅಂತಿದ್ದೆ ನೊಡಿದ್ರೆ ನಮ್ಮ ಮೆಸ್ಟ್ರು!!! ಆವಾಗ್ಲೆ ಅನಿಸಿದ್ದು ಗಾಂಧಿತಾತಗು ನಮ್ಮ ಸರ್ಗು ಬರಿ ತಲೆ ಬಿಟ್ರೆ ಬೇರೆ ಏಲ್ಲಾದರ್ಲ್ಲು ವ್ಯತ್ಯಾಸಅಂತಾ. ಸಿಟ್ಟು ನೆತ್ತಿಗಾಗ್ಲೆ ತಲಪಿತ್ತು "ಸರ್ ಏರಡು ರೂಪಾಯಿ ನಮ್ಮಜ್ಜಂದು, ಟಪಾಲ್ ತರೋಕೆ ಅಂತಾ ಕೋಟ್ಟಿದ್ದ್ರು ಕೋಡ್ರೀ ಸರ್" ಅಂದೆ. ಅದಕ್ಕೆ "ಲೇ ಊಡಾಳ ಆನ್ಯಾ, ಅಜ್ಜನ್ ಕಿಸೆ ಕತ್ರಿಹಾಕಿ ಏಲ್ಲಾ ಸೋರ್ಸೊಕೆ ಹುಟ್ಟಿ ನೋಡ್ಲೆ ನೀನು" ಅಂದ್ರು. ಸಿಟ್ಟು ಜಾಸ್ಟಿಈತ್ತು ಮೊಸ್ಟಲಿ ಅನುವಂಶ ನಮ್ಮಜ್ಜ ಕೋಟ್ಟಿರ್ಬೆಕು, ಅಜ್ಜಂಗು ಸಿಟ್ಟು ಜಾಸ್ತಿ. ಇನ್ನೊಂದು ಸಾರಿ ಕೇಳೊ ಆಸಾಮಿ ನಾನಾಗಿರ್ಲಿಲ್ಲಾ. ಏರಡು ರೂಪಾಯಿ, ಮೆಸ್ಟ್ರು ಮತ್ತೆ ಗಾಂಧಿ ಯೆಲ್ಲಾ ಬಿಟ್ಟು ಹೋರಗ ಬಂದೆ. ರಸ್ತೆಲೆ ನಿಂತಕೊಂಡು ರೂಪಾಯಿ ವಾಪಸ್ ತಗೋಳ್ಳೊಕೆ ವಿಚಾರಸದೆ.

ಆಗ ನನ್ನ್ ತಲೆಲಿ ಬಂದಿದ್ದು "लगे रहो मुन्ना बाई MBBS" ಗಾಂಧಿಗಿರಿ ಅಲ್ಲಾ, ಸ್ವಲ್ಪಾ ಗುಂಡಾಗಿರೀ. ಅದಕ್ಕೆ ನನ್ಗೆ ಮೊದಲು ತಲೆಗೆ ಬಂದಿದ್ದು ಮಂತ್ರಿ ಶರಣಪ್ಪನ್ನನ ಮನೆಲಿರೋ ಕೋಳಿ ಮತ್ತೆ ಅದರ ಮೋಟ್ಟೆ. ಕೋಳಿ ಮೋಟ್ಟೆ ಕದಿಯೊದೆನು ನನ್ಗೆ ಹೋಸ್ತೆನಲ್ಲಾ, ಯಾಕಂದ್ರೆ ದಿನಾಲು ಸಂಜೆ ಶರಣಪ್ಪನ್ನ ಮನೆಲಿರೊ ಏಲ್ಲಾ ಕೋಳಿ, ಹೂಂಜಗಳನ್ನಾ ಊರಲ್ಲೆಲ್ಲಾ ಹುಡಕಿ ಮತ್ತೆ ಪುಟ್ಟೆಗೆ ತಂದು ಹಾಕೋದು ಶರಣಪ್ಪನ್ನ ಮತ್ತೆ ನಾನು. ಶಾಲೆಯಿಂದಾ ಶರಣಪ್ಪನ್ನನ ಮನೆ ಇಪ್ಪತ್ತು ಹೆಜ್ಜೆ, ಹೋಗಿ ಏರಡು ಮೊಟ್ಟೆ ತಂದೆ. ಯುದ್ದಕ್ಕೆ ಹೋಗೊ ಯೋಧನಹಾಗೆ ಶಾಲೆಗೆ ವಾಪಸ್ ಬಂದೆ. ಬಾಕಲಲ್ಲೆ ನಿಂತಕೊಂಡು ಒಂದು ಮೋಟ್ಟೆನಾ ಸರ್ ತಲೆಗೆ ಏಸ್ದೇ, ಮೇಸ್ತ್ರ ಪೂಣ್ಯಾ ಮಿಸ್ಸ್ ಆಯ್ತು. ಅಸ್ಟರಲ್ಲೆ ಮೇಸ್ಟ್ರು ಕಿಂಡಕಿಲಿ ನಿಂತಗೊಂಡು ಪಕ್ಕದಲ್ಲೆ ಬಟ್ಟೆವಗಿತಿದ್ದ ನಮ್ಮ ತಾಯಿನ ಕೊಗಿ "ಆಕ್ಕೊರ್ರೆ!!! ನಿಮ್ಮಗಾ ಶಾಲಿಗೆ ತತ್ತಿ ತಗೊಂಡು ವಗಿಯಾಕೆ ಬಂದಾನೆ, ಜಲ್ದಿ ಬರ್ರಿ ಇಲ್ಲಿ" ಅಂತಾ ಕೂಗಿ ಕೋಂಡ್ರು. ನಮ್ಮ ತಾಯಿ ಬಟ್ಟೆಬಿಟ್ಟು ಬಂದು ನನ್ನಾ ಸಮಾದಾನ ಮಾಡಿ ಮನೆಗೆ ಕರದೊಯ್ದ್ರು.

ನನ್ಗೆ ಏರಡು ರೂಪಾಯಿ ಮಾತ್ರಾ ವಾಪಾಸ್ ಸಿಗಲಿಲ್ಲಾ, ಅದ್ರೆ ಏರಡನೆ ತರಗತಿಗೆ ಬೇರೆ ಶಾಲೆಗೆ ಹೋಗ ಬೇಕಾಯ್ತು.

1 comment:

ಸಿದ್ಧಾರ್ಥ said...

:) ಚೆನ್ನಾಗಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಅಂತಾರಲ್ಲಾ ಹಾಗೆ. ಎರಡನೇ ಕ್ಲಾಸ್‌ನಲ್ಲೇ ನಿನ್ನ ಪ್ರತಾಪ ತೋರಿಸ್ಬಿಟ್ಟಿದ್ದೆ ಅಂತಾಯ್ತು.

ಬರವಣಿಗೆ ಶೈಲಿ ಚೆನ್ನಾಗಿದೆ. ನಿನ್ನ ಬರವಣಿಗೆ ಹೀಗೇ ಮುಂದುವರೀಲಿ.

- ಸಿದ್ಧಾರ್ಥ