Friday 27 June, 2008

ಹಾಟ್ ಸೀಟ್


ಇಂಜಿನೀಯರಿಂಗ್ ಪದವಿ ಸಿಕ್ಕಾದಮೆಲೆ ಐಟಿ ಸಿಟಿ ಬೆಂಗಳೂರನಲ್ಲಿ ನಾಲ್ಕು ತಿಂಗಳು ನೌಕರಿ ಅಲೆದಾಟ, ಅಮೇಲೆ ಡಿಸಂಬರ ೧, ೨೦೦೪ಕ್ಕೆ ಸ್ವದೇಶದ್ದೆ ಆದ ಸಾಪ್ಟವೇರ್ ಕಂಪನಿಯಲ್ಲಿ ನೌಕರಿ. ಇನ್ನೆನು ತಿಂಗಳು ಮುಗಿತು ಅನ್ನೋ ಅಸ್ಟರಲ್ಲಿ ಕೋತಿ ಮರದಿಂದಾ ಮರಕ್ಕೆ ಜಿಗಿಯೊ ಹಾಗೆ ಮತ್ತೆ ಕಂಪನಿ ಬದಲಾವಣೆ. ಜನೇವರಿ ೨೪ ೨೦೦೫ಕ್ಕೆ ಮಲ್ಟಿ ನ್ಯಾಷನಲ್ಲ ಕಂಪನಿ ಸೇರಿಕೊಂಡೆ. ಮೊದಲ ದಿನಗಳು ಮೆಂಟರ್ ಆಗಿ ಆಂಜು ಚಂದ್ರನ್ ಕೇರಳದವಳು, ಮತ್ತೆ ಏರಡು ತಿಂಗಳನಂತರ ಮದುವೆ ರಜೆಯಿಂದ ಬಂದ ರಂಜನಿ ನಾಗರಾಜನ್ ಮೆಂಟರ್ ಆದ್ರು, ಇವರು ತಮಿಳುನಾಡಿನವರು. ಕಾಲೇಜನಲ್ಲಿ UNIX ಕಲಿತಿರೋದರಿಂದಾ ಮೊದಲು ಬಂದ ಕೆಲಸ ಅಸ್ಟೆನು ಕಸ್ಟ ಇರಲಿಲ್ಲ, ಯಾಕಂದ್ರೆ ಮೊದಲ ದಿನಬಳಲ್ಲಿ ಬರಿ ಹೂಣಸೆ ಬೀಜಾ ಆರಿಸೊ ಕೆಲಸ.ಕೆಲಸದಬಗ್ಗೆ ಹೇಚ್ಚಿಗೆ ಹೇಳೊದು ಅವಶ್ಯ ಇಲ್ಲಾ, ಹೆಂತಹಾ ಕೆಲಸ ಅಂತ ಏಲ್ಲರಿಗೂ ಗೋತ್ತಿರೊ ವಿಷಯ.


ಅವತ್ತು ಟೀಮ್ ಪಾರ್ಟಿ, ಕಛೇರಿಗೆ ಹತ್ತಿರಾನೆ ಇರೊ ರೈಸ್ ಬಾಲ್ ಹೋಟಲ್ನಲ್ಲಿ. ರಂಜನಿ ಮೆಂಟರ್ ಆದ್ದರಿಂದ ಟೀಮ್ನ್ ನಲ್ಲಿ ನಾನು ಜಾಸ್ತಿ ಮಾತಾಡ್ತ್ಸ್ತಿದ್ದು ಅವರನ್ನೆ, ಇಲ್ಲಾಂದ್ರೆ ಅಂಜು. ಟೀಮನಲ್ಲಿ ಒಟ್ಟು ೧೬ ಮೇಂಬರ, ಹೋಟಲ್ನಲ್ಲಿ ಹೋಗ್ತಿದ್ದಹಾಗೆ ರಂಜನಿ ಪಕ್ಕದಲ್ಲೆರೊ ಕಾಲಿ ಕುರ್ಚಿ ಅಲಂಕರಿಸಿದೆ. ಚೇರ್ ಅಕ್ರಮಿಸೋಕೆ ಅಂತ ಬಂದಿದ್ದ ಚೇತನ ನನ್ನ ಪಕ್ಕದಲ್ಲೆ ಕಾಲಿಯಿರೊ ಇನ್ನೊಂದು ಕುರ್ಚಿಲಿ ಕೂತಗೊಂಡ. ಅಸ್ಟರಲ್ಲೆ ಸುತ್ತಲು ಕುತ್ಗೊಂಡಿದ್ದ ಇನ್ನುಳಿದ ಟೀಮ್ ಮೆಂಬರಗಳು ಹೊಟ್ಟೆ ಹರಿದು ಕರಳು ಹೊರಗೆ ಬರೊ ಹಾಗೆ ನಗೊಕೆ ಸೂರು ಹಚಗೊಂಡ್ರು. ಯಾಕೆಅಂತಾ ಕೇಳೊಕೆ ನನ್ಗೆ ದ್ಯೈರ್ಯ ಇರಲಿಲ್ಲ ಹಾಗೆ ಇಂಟರೆಸ್ಟು ಬರಲಿಲ್ಲಾ. ಏಲ್ಲರು ಹೋಟ್ಟೆ ಬಿರಿಯೊಹಾಗೆ ಹತ್ತು ಇಪ್ಪತ್ತು ನಿಮಿಷ ನಕ್ಕು ಅಮೇಲೆ ಜಠರ ತುಂಬಿಸೊಕೆ ಸೂರು ಹಚಕೋಂಡ್ರು.

ಏಡಕ್ಕೆ ಚೇತನ್ ಹಾಗೆ ಬಲಗಡೆ ರಂಜನಿ ಮತ್ತೆ ಮದ್ದ್ಯದಲ್ಲಿ ನಾನು ಮಾತಡ್ತಾ ತಿನ್ನೊ ಕಾರ್ಯಕ್ರಮ ನಡಿತಾಯಿತ್ತು. ಚೇತನ, ನನ್ಗೆ ಕಳೆದ ಇಪ್ಪತ್ತು ದಿನಗಳಿಂದ ಪರಿಚಯ ಇದ್ದೊನು, ಮೂಲತಹಾ ಮೈಸೂರಿನವನು. ಚೇತನಗೆ coding ಬಿಟ್ಟ್ರೆ ಬೇರೆ ವಿಷಯಗಳಲ್ಲಿ ಆಸಕ್ತಿ ಇದ್ದವನು ಅಂತಾ ನನ್ಗಾಗ್ಲೆ ತಿಳದಿತ್ತು. ರಂಜನಿ ಮೆಂಟರ್ ಆದ್ದರಿಂದ ಅವರನ್ನಾ ಚೇತನಗೆ ಪರೆಚಯಿಸೊಣ ಅಂತ ವಿಚಾರ ಬಂದದ್ದೆ ತಡಾ, ಪರೆಚಯಕೊಡೊಕೆ ಸ್ಟಾರ್ಟ್ ಮಾಡ್ದೆ:

"ರಂಜನಿ, ಇವರು ಚೇತನ ಅಂತಾ ಮೈಸೂರಿನವರು"

ಅದಕ್ಕೆ ರಂಜನಿ "ಹ್ಯೌದು" ಅಂತಾ ಕಡಿಮೆ ದ್ವನಿಯಲ್ಲಿ ಉತ್ತರಿಸಿದ್ರು. ಚೇತನ್ ಕೂಡಾ ಒಮ್ಮೆ ನನ್ನ ಮೊಕಾನೊಡಿ ಸುಮ್ಗಾದ್ರು.
ಹಾಗೆ ನನ್ನ ಮಾತನ್ನ ಮುಂದುವರಿಸಿದೆ,


"ಚೇತನ್ ಮತ್ತೆ ನಾನು ಒಂದೆ ಕಂಪೋನೇಂಟನಲ್ಲಿ ಕೆಲಸ ಮಾಡೊದು", ಇಬ್ಬರು ಕಡೆಯಿಂದ ಉತ್ತರಬರಲಿಲ್ಲಾ ಅನ್ನೋದನ್ನ ನಾನು ಗಮನಿಸಲೆ ಇಲ್ಲಾ ಅನಿಸುತ್ತೆ.


"ಚೇತನಗೆ ತಬಲ ನುಡಿಸೋದು ಅಂದ್ರೆ ತುಂಭ ಪ್ರೀತಿ, ಇವರು ಚೇನ್ನಾಗಿ ನುಡಿಸ್ತಾರಂತೆ" ಅಂದೆ.

ಆಗ ರಂಜನಿ ಕೂಲಾಗಿ "ಹೌದು, ಇದೆಲ್ಲಾ ನನ್ಗೆ ಗೊತ್ತು.....ಚೇತನ್ ನನ್ನ ಗಂಡ" ಅಂದ್ರು. ಆವಾಗ್ಲೆ ನನ್ಗೆ ತಿಳಿದದ್ದು, ಇಬ್ಬರ ನಡುವೆ ಕುತಗೊಂಡಾಗ ಯಾಕೆ ಉಳಿದೆಲ್ಲಾ ಟೇಮ್ ಮೆಂಬರ್ಸ್ ನಕ್ಕಿದ್ದು ಅಂತಾ. ಆದ್ರೆ ನಾನಾಗ್ಲೆ ಹಾಟ್ ಸೀಟನಲ್ಲಿ ಕುತ್ಗೊಂಡಿದ್ದೆ "ಕಬಾಬ್ ಮೇ ಹಡ್ದಿ" ತರಾ.

1 comment:

ಸಿದ್ಧಾರ್ಥ said...

ಪುಣ್ಯ... ಅವನ ಹತ್ರ ಅವಳಬಗ್ಗೆ ಮಾತಾಡಕ್ಕೆ ಹೋಗ್ಲಿಲ್ವಲ್ಲ... ತಪ್ ತಿಳ್ಕೊಂಡ್ಬಿಟ್ಟಿರೋನು...

ನಿನ್ನೆ ಒಂದು... ಇವತ್ತೊಂದು... ಬ್ಲಾಗಿಂಗ್‌ನಲ್ಲೂ T20 ಶುರುಮಾಡ್ಬಿಟ್ಯಲ್ಲಪ್ಪಾ... :)

ಚೆನ್ನಾಗಿದೆ... ಹೀಗೇ ಬರೀತಾ ಇರು.