Monday 7 July, 2008

ಚೀಲ್ಡ್ರನ್ ಪ್ಲೇ ಹೋಮ್

ನಾನು ಕೆಲಸಮಾಡುವ ಕಛೇರಿ ಮನೆಯಿಂದ ಕೇವಲ ೫ ಕೀಮಿ, ಮದ್ಯದಲ್ಲಿ ೬ ಚೀಲ್ಡ್ರನ್ ಪ್ಲೇ ಹೋಮ್ ಗಳು. ಮಕ್ಕಳನ್ನ ಹೆತ್ತವರು ಕೆಲಸದ ಭಾರನು ಹೊತ್ತಿರೊದರಿಂದ, ಬೆಂಗಳೂರ ಸಿಟಿ...ಬ್ಯುಸಿ ಲೈಪ್ನಲ್ಲಿ ಕನಿಸ್ಟಪಕ್ಷ ೫೦-೬೦% ಮಕ್ಕಳ ಪಾಲನೆ ಈ ಪ್ಲೇ ಹೋಮ್ ಗಳಲ್ಲೆ ಇರಬಹುದು. ಬೆಳಗಿನ ಜಾವ ೮ ಘಂಟೆಗೆ ಮಗುವನ್ನು ಅಲ್ಲಿ ಬಿಟ್ಟರೆ ಮತ್ತೆ ಮರಳಿ ಸಂಜೆ ೬ ಗಂಟೆಯ ವರೆಗೆ ಮಗುವಿನಬಗ್ಗೆ ತಲೆಕೆಡಿಸಿಕೋಳ್ಳುವ ವಿಚಾರವೆ ಇಲ್ಲ, ಪ್ಲೇ ಹೋಮನಲ್ಲಿರೊ ಆಯಾಗಳು ನಿಮ್ಮಮಗುವಿನ ಪಾಲನೆಯನ್ನು ನಿಮ್ಮಪರವಾಗಿ ಚೇನ್ನಾಗಿ ಮಾಡ್ತಾರೆ. ದಿನದ ಕನಿಷ್ಟ ೪೦% ಸಮಯವನ್ನು ಮಗು ಪ್ಲೇ ಹೋಮ್ ನಲ್ಲಿ ಇನ್ನ್ನುಳಿದ ಮಕ್ಕಳೋಂದಿಗೆ, ಅಲ್ಲಿರೊ ಆಟಿಕೆ ಸಾಮಾನುಗಳೊಂದಿಗೆ, ಕೆಲವಮ್ಮೆ ತನ್ನದೆ ಆದ ಲೋಕದಲ್ಲಿ ಮತ್ತು ತಾಯಿ ಸಮಾನರಾದ ಆಯಾಗಳೋಂದಿಗಿ ಕಳೆಯುತ್ತವೆ.

ಕಛೇರಿಯಲ್ಲಿ ಹೊಸತಾಗಿ ನಿರ್ಮಾನವಾದ ಜೀಮ್ಮನ ಪಕ್ಕದಲ್ಲಿರೋದು, ಕಛೇರಿಯಲ್ಲಿ ಕೆಲಸ ಮಾಡುವ ಉದ್ಯೊಗಿಗಳ ಚಿಕ್ಕ ಮಕ್ಕಳನ್ನು ನೋಡಿಕೊಳ್ಲಲೆಂದೆ ಕಟ್ಟಿಸಿದ ಪ್ಲೇ ಹೋಮ್!!!. ಆವತ್ತು ಶುಕ್ರವಾರ, ಸ್ವಲ್ಲ ಜಾಸ್ತಿ ಸಮಯವನ್ನು ಜೀಮ್ನಲ್ಲಿ ಕಳೆದು...ಸುಮಾರು ೬:೩೦ಕ್ಕೆ ಹೊರಬಂದೆ. ಪಕ್ಕದಲ್ಲೆರೊ ಪ್ಲೇ ಹೋಮನ ಬಾಗಿಲಲ್ಲಿ ನಿಂತ ಒಬ್ಬ ಮಹಿಳೆಯನ್ನು ಗಮನಿಸಿದೆ, ಅವಳ ಮಾತಿನಲ್ಲಿ, ನಡೆಯಲ್ಲಿ ಅವಸರವೆದ್ದು ಕಾನೂತ್ತಿತ್ತು. ಪಾಪ....ವಾರದ ಅಂತ್ಯ ನೋಡಿ...ವೀಕೆಂಡ. ಪಕ್ಕದಲ್ಲಿರೊ ಇನ್ನೊಬ್ಬ ಮಹಿಳೆಯ ಬಳಿ ಇರುವ ಮಗುವನ್ನು ಈಕೆ ತನ್ನಡೆಗೆ ಪ್ರೀತಿಯಿಂದ ಕೂಗಿ ಕರೆದಳು. ಮಗು ಅದನ್ನು ಗಮನಿಸಲ್ಲಿಲ್ಲಾ ಅನಿಸುತ್ತೆ ಬಹುಶ್:, ತನ್ನ ಪಾಡಿಗೆ ಅದರದೆ ಲೋಕದಲ್ಲಿ ಲಿನವಾಗಿತ್ತು. ಏರಡು-ಮೂರು ಸಾರಿ ಕರೆದರು...ಏನು ಉತ್ತರ ಬರಲಿಲ್ಲ. ಅಷ್ಟರಲ್ಲೆ ಇನ್ನೊಬ್ಬ ಮಹಿಳೆ ಮಗುವನ್ನ ಬಾಗಿಲಿನವರೆಗೆ ತಂದು "ನೋಡಲ್ಲಿ....ಯಾರು ಬಂದಿದಾರೆ ಅಂತಾ....ಹೋಗು" ಅಂತ ಹೇಳುತ್ತಲೆ ಮಗುವನ್ನ ಬಾಗಿಲಲ್ಲಿ ನಿಂತ ಮಹಿಳೆಯ ಹತ್ತಿರಕ್ಕಿ ತಂದಳು, ಮಗುವನ್ನು ಪ್ರೀತಿಯಿಂದ ತನ್ನಡೆಗೆ ತಗೆದುಕೊಳ್ಳಲು ಈಕೆ ತನ್ನ ಕೈಗಳನ್ನ ಮುಂದೆ ಮಾಡಿದಳು. ಮಗುಮಾತ್ರ ಆ ಮಹಿಳೆಯನ್ನ ತೊರೆದು...ಈ ಮಹಿಳೆ ಹತ್ತಿರಕ್ಕೆ ಬರಲು ಮನಸ್ಸೆ ಇಲ್ಲದವರಂತೆ ವರ್ತಿಸಿತು. ಸ್ವಲ್ಪ ಸಮಯದ ನಂತರ ಹಾಗು ಹೀಗೂ ಮಾಡಿ ಆ ಮಹಿಳೆ ಮಗುವನ್ನು ಸಮಾಧಾನ ಮಾಡಿ ಮತ್ತೆ ಕರೆತಂದು..."ನೋಡಲ್ಲಿ...ಯಾರು ಬಂದಿದಾರೆ..ಮಮ್ಮಿ..ಬಂದಿರೋದು ಚಿನ್ನು.." ಅಂತಾ ಮಗುವನ್ನ ಬಾಗಿಲಲ್ಲಿ ನಿಂತ ಮಗುವಿನ ತಾಯಿಯ ಬಳಿಗೆ ಕೋಟ್ಟಳು.

ಆವಾಗಲೆ ನನಗೆ ಗೋತ್ತಾದದ್ದು ...ಅವಳು ತನ್ನ ಮಗುವನ್ನು ಅಲ್ಲಿಂದ ಕರೆದೊಯ್ಯಲು ಬಂದಿದ್ದಳು ಅಂತ. ಕ್ಷಣದಲ್ಲಿ ನನ್ನ ಬಾಲ್ಯ ಜೀವನವು ನನ್ನ ಮನಸ್ಸಿನ ಪರದೆ ಮೇಲೆ ಹಾಗೆ ಮತ್ತೊಮ್ಮೆ ಮೂಡಿ ಹೋಯಿತು.....ಬಹಳ ವ್ಯತ್ಯಾಸ ಅನಿಸ್ತು ಹಾಗೆ ಅನಿವಾರ್ಯನು ಇರಬಹುದು ಅನಿಸ್ತು.

1 comment:

ಸಿದ್ಧಾರ್ಥ said...

ಈಗಿನ ಹೆಣ್ಣಿಗೆ ತಾಯ್ತನಕ್ಕೇ ಪುರುಸೊತ್ತಿಲ್ಲ...
ಅದಕ್ಕೇ ಅಲ್ವಾ ಪುರಂದರದಾಸ್ರು ಹೇಳಿದ್ದು...
"ಇದು ಎಂಥಾ ಕಾಲವಯ್ಯಾ???"